	ಹೊರೋಲಜಿ ಅಥವಾ ಹೊರಾಶಾಸ್ತ್ರ
	
ಗಡಿಯಾರದ ಶಾಸ್ತ್ರಕ್ಕೆ ಹೊರೋಲಜಿ ಎಂದು ಹೆಸರು. ಹೋರೋ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಕಾಲಮಾನ ಲಿಜಿ ಎಂದರೆ ಹೇಳುವುದು ಅಥವ ಶಾಸ್ತ್ರ . ಹಿಂದೆ ನಮ್ಮ ಭಾರತ ದೇಶದಲ್ಲಿ ಕೂಡ ಹೋರಾಶಾಸ್ತ್ರ ಬಳಕೆಯಲ್ಲಿತ್ತು. ಇದು ಸಂಸ್ಕøತದ ಅಹೋರಾತ್ರಿ ಎನ್ನುವ ಪದದ ಮಧ್ಯದಲ್ಲಿರುವ ಎರಡು ಅಕ್ಷರಗಳನ್ನು ತೆಗೆದುಕೊಂಡು ಹೋರಾ ಅನ್ನುವ ಪದವನ್ನು ರೂಪಿಸಿದ್ದಾರೆ. ಹೋರು ಎಂದರೆ ಕಾಲ ಎಂದರ್ಥ.  ಪ್ರಪಂಚದಲ್ಲಿಯೇ ಮೊಟ್ಟ ಮೊದಲಿನ ಕಾಲಮಾಪನ ತಜ್ಞರು ಭಾರತೀಯರು. ಈ ಹೋರಾ ಶಾಸ್ತ್ರವನ್ನು ಅತ್ರಿಮುನಿಗಳು ರೂಪಿಸಿದರೆಂದು ಪುರಾಣಗಳಲ್ಲಿ ಉಲ್ಲೇಖನವಿದೆ. ನಂತರ ಕ್ರಿ.ಶ.499ರಲ್ಲಿ ಆರ್ಯಭಟ, ಕ್ರಿ.ಶ.505ರಲ್ಲಿ ವರಹಮಿಹಿರ, ಮತ್ತು ಕ್ರಿ.ಶ.1150ರಲ್ಲಿ ಭಾಸ್ಕರಾಚಾರ್ಯರು ತಮ್ಮ `ಸಿದ್ಧಾಂತ ಶಿರೋಮಣಿ ಎನ್ನುವ ಪ್ರಸಿದ್ಧ ಗ್ರಂಥದಲ್ಲಿ ಕಾಲಮಾನ ಶಾಸ್ತ್ರದ ಬಗ್ಗೆ ಅನೇಕ ಉಪಯುಕ್ತ ವಿಷಯಗಳನ್ನು ಬರೆದಿದ್ದಾರೆ.
ಆರ್ಯಭಟ, ಸಂವತ್ಸರದ ಅವಧಿ 365, 25868 ದಿನಗಳೆಂದು ನಿರ್ಣಯಿಸಿದನು.

ವರಹಮಿಹಿರನ `ಪಂಚ ಸಿದ್ಧಾಂತದಲ್ಲಿ ವಿಷುವಚ್ಚಲನೆಯ ಪ್ರಸ್ತಾಪವಿದೆ.

ಕ್ರಿ.ಶ.628 ಬ್ರಹ್ಮಗುಪ್ತನು ನಕ್ಷತ್ರ ಸಂವತ್ಸರದ ಅವಧಿ 365.26775 ದಿನಗಳೆಂದು ನಿರ್ಣಯಿಸಿದನು.
ಭಾಸ್ಕರಾಚಾರ್ಯರು ನಕ್ಷತ್ರ ಸಂವತ್ಸರಕ್ಕೆ :365.258438 ದಿನಗಳೆಂದು ನಿರ್ಣಯಿಸಿದರು. ಇದರ ಪ್ರಕಾರ.
 
 1 ದಿನ----------60 ಘಳಿಗೆಗಳು (24 ಗಂಟೆಗಳು)
 1 ಘಳಿಗೆ --------60 ವಿಘಳಿಗೆಗಳು (24 ನಿಮಿಷಗಳು)
 1 ದಿಗಳಿಗೆ-------- 60 ಪರಗಳಿಗೆಗಳು (24 ಸೆಕೆಂಡ್)
 1 ಪರಗಳಿಗೆ ------ 60 ಸೂಕ್ಷ್ಮಗಳಿಗೆಗಳು (0.4 ಸೆಕೆಂಡ್)
 1 ಸೂಕ್ಷ್ಮಗಳಿಗೆ= 	     0.0067 ಸೆಕೆಂಡ್

ಆದ್ದರಿಂದ ಸಂವತ್ಸರದ ಅವಧಿ 365 ದಿನಗಳು 15 ಗಳಿಗೆಗಳು 30 ವಿಗಳಿಗೆಗಳು 22 ಪರಗಳಿಗೆಗಳು 30 ಸೂಕ್ಷ್ಮಗಳಿಗೆಗಳು. ಎಂದರೆ (365 ದಿನ ಗಂಟೆ, 12 ನಿಮಿಷ, 30 ಸೆಕೆಂಡ್ (ಒಂದು ಸಂವತ್ಸರದ ಅವಧಿ)
ಕಣ್ಣುಗಳ ರೆಪ್ಪೆ ಬಡಿಯಲು ತಗಲುವ ಕಾಲದ ಅವಧಿ ನಿಮೇಷ.

ನಿಮೇಷದ 30ನೇ ಒಂದು ಭಾಗ ತತ್ಪರ, ಅದರ 100ನೇ ಒಂದು ಭಾಗ ತ್ರುಟಿ, 18 ನಿಮಿಷಗಳಿಗೆ ಒಂದು ಕಾಷ್ಠಾ, 30 ಕಾಷ್ಠಾಗಳಿಗೆ ಒಂದು ಕಲೆ, 30 ಕಲೆಗೆ ಒಂದು ನಕ್ಷತ್ರ ಘಟಿಕೆ.
 	1 ದಿನ = 30 ಕ್ಷಣ (24 ಗಂಟೆ)
 	1 ಕ್ಷಣ = 2 ಘಟಿ (48 ನಿಮಿಷ)
 	1 ಘಟಿ = 30 ಕಲಾ (24 ನಿಮಿಷ)
 	1 ಕಲಾ = 30 ಕಾಷ್ಠಾ (48 ಸೆಕೆಂಡ್)
 	1 ಕಾಷ್ಠಾ = 18 ನಿಮಿಷ (----ಸೆಕೆಂಡ್)
 	1 ನಿಮೇಷ = 30 ತತ್ಪರ (4/45 ಸೆಕೆಂಡ್)
 	1 ತತ್ಪರ = 100 ತ್ರುಟಿ (2/675 ಸೆಕೆಂಡ್)
ಮೂರ್ತ ಕಾಲವನ್ನು ಅಳೆಯಲು ಒಂಬತ್ತು ಪದ್ಧತಿಗಳನ್ನು ಪ್ರಾಚೀನ ಭಾರತೀಯರು ಕಂಡುಹಿಡಿದಿದ್ದಾರೆ.

1.ಬ್ರಹ್ಮ, 2.ದಿವ್ಯ, 3. ಪಿತ್ರ್ಯ, 4.ಪ್ರಾಜಾಸತ್ಯ, 5.ಗೌರವ , 6.ಸೌರ, 7.ಸಾವನ, 8.ಚಾಂದ್ರ, 9.ಅಕ್ರ್ಷ

ಇವುಗಳಲ್ಲಿ ಮೊದಲು ನಾಲ್ಕು ಪದ್ಧತಿಗಳು ಅತ್ಯಂತ ಸ್ಥೂಲವಾಗಿ ಕಲ್ಪನಿಕ ಎನ್ನಿಸುತ್ತದೆ. ಮಾನವನ ಮನಸ್ಸು ಎಣಿಸಬಹುದಾದ ಅತೀವ ಬೃಹತ್ ಪ್ರಮಾಣವನ್ನು ಅವು ಒಳಗೊಂಡಿದೆ. ಉಳಿದ ಐದು ಅಳತೆಗಳು ಕಾಲವನ್ನು ಅಳೆಯಲು ಜ್ಯೋತಿರ್ವಿದರು ನಿಸರ್ಗದಿಂದಲೇ ಶೋಧಿಸಿ ತೆಗೆದ ವಿಧಾನಗಳಾಗಿ ಇಂದಿಗೂ ಪ್ರಚಾರದಲ್ಲಿದೆ. ಕಾಲಗಣನೆಗೆ ಮೂಲ ಬಿಂದು ಸೂರ್ಯ. ರಾತ್ರಿ-ಹಗಲುಗಳೇ ಕಾಲಗಣನೆಯ ಮೂಲ ಮಾಪಕಗಳು. 

ಕಾಲವನ್ನು ಕುರಿತು ಭಾರತೀಯರ ತಿಳವಳಿಕೆ ಬಹಳ ಆಳವಾಗಿತ್ತು. ಅವಕಾಶ (Sಠಿಚಿಛಿe), ಪದಾರ್ಥ(mಚಿಣಣeಡಿ), ಮತ್ತು ಕಾಲ( ಣime) ಇವು ಭೌತ ಜಗತ್ತಿನ ಮೂರು ಮೂಲ ದ್ರವ್ಯಗಳು ಒಂದಕೊಂದು ಸಂಬಂಧಿಸಿಕೊಂಡೆ ಇವು ಅಸ್ತಿತ್ವದಲ್ಲಿವೆ. ಗಣನೆಗೆ ಒಳಪಡುವ ಕಾಲವು ಸ್ಥೂಲ ಮತ್ತು ಸೂಕ್ಷ್ಮ ಎಂದು ಎರಡು ವಿಧ ಇದನ್ನೇ ಮೂರ್ತ ಹಾಗೂ ಅಮೂರ್ತ ಎಂದು ಹೇಳಲಾಗಿದೆ. ಮೂರ್ತಕಾಲವು ಸ್ಥೂಲವಾದುದರಿಂದ ವ್ಯವಹಾರಕ್ಕೆ ಅರ್ಹ ಅಮೂರ್ತ ಕಾಲವು ಸೂಕ್ಷ್ಮವಾದ ಕಾರಣ ಅಳೆಯಲು ಉಪಕರಣವಿಲ್ಲದೆ ವ್ಯವಹಾರಕ್ಕೆ ಯೋಗ್ಯವಾಗಿಲ್ಲ. ನಮ್ಮ ಭಾರತೀಯ ಕಾಲಮಾನ ಶಾಸ್ತ್ರವನ್ನು ವಿಶ್ಲೇಷಿಸಿ ನೋಡಿದರೆ ನಮ್ಮ ಪೂರ್ವಿಕರ ಕಾಲಜ್ಞಾನದ ಎತ್ತರ ನಮಗೆ ಮನವರಿಕೆಯಾಗುತ್ತದೆ.

ಸುಧಾರಿತ ಜಲಯಂತ್ರ

 `ಸೈಸಿಬಿಯಸ್ ಎಂಬ ಗ್ರೀಕ್‍ವಿಜ್ಞಾನಿಯು ತಾನೇ ತಾನಾಗಿ ಕೆಲಸ ಮಾಡುವ ``ಜಲಯಂತ್ರ ವನ್ನು ಕ್ರಿ.ಪೂ 250ರಲ್ಲಿ ತಯಾರಿಸಿದನು. ಒಂದು ತೊಟ್ಟಿಯಲ್ಲಿ ಸ್ಥಿರವಾದ ನೀರಿನ ಮಟ್ಟವಿರಬೇಕು. ಇದರಿಂದ ನೀರು ಸಿಲೆಂಡರ್ ಆಕಾರದ ಪಾತ್ರೆಗೆ ಬೀಳುತ್ತಿರುತ್ತದೆ ಈ ಜಲದ ಮೇಲೆ ಒಂದು ``ಬೆಂಡು ತೇಲುತ್ತಿರುತ್ತದೆ. ಈ ಬೆಂಡಿಗೆ ಉದ್ದವಾದ ಕೋಲನ್ನು ಜೋಡಿಸಿ ತೋರು ಮುಳ್ಳನ್ನು ಬಿಗಿಯುತ್ತಾರೆ. ಸಿಲೆಂಡರ್‍ನಲ್ಲಿ ನೀರು ಬಿದ್ದಾಗ ಅದರಲ್ಲಿರುವ ಬಿರುಡೆ ಮೇಲೆ ಏರಿ ಅಳತೆ ಪಟ್ಟಿಯ ಮೇಲೆ ಸಮಯ ತೋರಿಸುತ್ತದೆ, ಈ ಉದ್ದವಾದ ಅಳತೆ ಪಟ್ಟಿಗೆ ಬದಲಾಗಿ ಚಕ್ರಾಕಾರದ ಹಲ್ಲುಗಳಿರುವ ಅಳತೆ ಪಟ್ಟಿಯನ್ನು ಸಹಾ ಉಪಯೋಗಿಸಬಹುದು. ಸಿಲೆಂಡರ್‍ಗೆ ಜೋಡಿಸಿರುವ ಒಂದು ಬಾಗಿದ ಕೊಳವೆಯಿಂದ ನೀರು ಮೊಣಚು ತುದಿಗೆ ಬರುವುದಕ್ಕೆ ಒಂದು ದಿನ ಪೂರ್ತಿಯಾಗಿರುತ್ತದೆ. ಆಗ ``ಸೈಫನ್ ಸಿದ್ಧಾಂತದ ಆಧಾರಿತ ನಿಯಮವಾಗಿ ನೀರಿನ ಉಳಿದ ಭಾಗ ತಾನೇ ತಾನಾಗಿ ಖಾಲಿಯಾಗಿ ``ಬೆಂಡು ಸಿಲೆಂಡರ್‍ನ ತಳಭಾಗಕ್ಕೆ ಬಂದು ಬಿಡುತ್ತದೆ. ಮತ್ತೆ ಮುಂದಿನ ದಿನ ಇದರ ಪುನರಾವರ್ತನೆ ಯಾಗುತ್ತದೆ. ಈ ಹೊರಬರುವ ನೀರಿನಿಂದ ದಿನಸೂಚಿ ಚಕ್ರವು ತಿರುಗುತ್ತದೆ. ಈ ದಿನ ಸೂಚಿಯ ಬದಲು ಗಂಟೆ, ನಿಮಿಷ, ಸೆಕೆಂಡುಗಳನ್ನು ಸೂಚಿಸುವ ಅವಕಾಶವನ್ನ ಕಲ್ಪಿಸುವುದು ಕಷ್ಟವೇನಲ್ಲ. 16ನೇ ಶತಮಾನದಲ್ಲಿ ಗೆಲಿಲಿಯೋ ಪಾದರಸವನ್ನು ನೀರಿನ ಬದಲಾಗಿ ಉಪಯೋಗಿಸಿ ತನ್ನ ಆಕಾಶಕಾಯ ವೀಕ್ಷಣೆಯ ಕಾಲ ನಿರ್ಣಯ ಮಾಡುತ್ತಿದ್ದನು.

ಉರಿಯುವ ಗಡಿಯಾರಗಳು

 ಉರಿಯುವ ಗಡಿಯಾರದಲ್ಲಿ ಎರಡು ವಿಧಾನಗಳಿದ್ದವು. ಎಣ್ನೆ ದೀಪಗಳು, 2.ಮೇಣದ ಬತ್ತಿಗಳು, ಎಣ್ಣೆ ದೀಪಗಳಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಎಣ್ಣೆಯು ಖರ್ಚಾದ ಪ್ರಮಾಣಕ್ಕೆ ತಗಲಿರುವ ಸಮಯದಿಂದ ಕಾಲಮಾಪನ ಮಾಡುವುದು. ವಿಶಿಷ್ಟ ಅಳತೆಯ ಮೇಣದ ಬತ್ತಿಗಳನ್ನು ತಯಾರಿಸಿ ಅದಕ್ಕೆ ಭಾಗಗಳನ್ನು ಗುರುತು ಮಾಡಿ ಆ ಭಾಗ ಉರಿದ ಮೇಲೆ ಅದರ ಕಾಲ ಮಾಪನವಾಗುತ್ತಿತ್ತು.
ಕ್ರಿ.ಪೂ 100ರ ಹೊತ್ತಿಗೆ ಚೀಣಾದಲ್ಲಿ ಒಂದು ದಿನ ಉರಿಯುವ ಕಡ್ಡಿಗಳನ್ನು ಸಮಭಾಗಗಳಾಗಿ ಗುರುತು ಮಾಡಿರುವ ಬೆಂಕಿಗಡಿಯಾರಗಳಿದ್ದವು. ನಿಧಾನವಾಗಿ ಉರಿಯುವ ಮರದ ಹೊಟ್ಟು, ಇದ್ದಿಲು ಪುಡಿ ಮತ್ತು ಸಗಣಿಯ ಮಿಶ್ರಣದಿಂದ ಉದ್ದವಾದ ಕಡ್ಡಿಯನ್ನು ತಯಾರಿಸಿ ಬೆಂಕಿಗಡಿಯಾರವಾಗಿ ಉಪಯೋಗಿಸುತ್ತಿದ್ದರು. ಈ ಬೆಂಕಿಯ ಗಡಿಯಾರದಲ್ಲೂ ಬರುವ ತೊಡಕೇನೆಂದರೆ ಒಂದೇ ಅಳತೆಯ ಬೆಂಕಿಗಡಿಯಾರಗಳನ್ನು ತಯಾರಿಸುವುದು ಕಷ್ಟ. ಮೇಣದ ಬತ್ತಿಯಲ್ಲಿರುವ ಬತ್ತಿಯ ವ್ಯತ್ಯಾಸ, ಉರಿಯುವ ವೇಗವನ್ನು ಏರುಪೇರು ಮಾಡುತ್ತದೆ. ಆದ್ದರಿಂದ ಇದು ಜಲಯಂತ್ರದಷ್ಟು ನಿರ್ದಿಷ್ಟವಾಗಿ ಕಾಲಮಾಪನ ಮಾಡಲಾರದು ಆದರೆ ತಯಾರಿಕೆ ಬಹಳ ಸುಲಭ.

ಮರಳಿನ ಗಡಿಯಾರ

ಕ್ರಿ.ಶ.8ನೇ ಶತಮಾನದಲ್ಲಿ `ರೂಯಟ್ ಪ್ರಾಂಡ್ ಎಂಬಾತ ಮರಳುಗಡಿಯಾರವನ್ನು ರೂಪಿಸಿದನು. ಎರಡು ಗಾಜಿನ ಬಟ್ಟಲುಗಳ ಮಧ್ಯೆ ಸಣ್ಣದಾದ ಗಾಜಿನ ಕೊಳವೆಯನ್ನು ಜೋಡಿಸಲಾಗಿದೆ. ಸಣ್ಣ ಮರಳುಗಳನ್ನು ಹಾಕಿ ಮರಳು ಹೊರಬರದಂತೆ ಎರಡರ ಬಾಯನ್ನು ಗಟ್ಟಿಯಾಗಿ ಮುಚ್ಚುತ್ತಾರೆ, ಮರಳು ಕಣಗಳ ಗಾತ್ರ ಮತ್ತು ಪ್ರಮಾಣದ ಆಧಾರದ ಮೇಲೆ ಮಧ್ಯದ ಕೊಳವೆಯ ವ್ಯಾಸವನ್ನು ನಿರ್ಧರಿಸ¨ಬೇಕು. ಇವೆಲ್ಲದರ ಆಧಾರದಮೇಲೆ ಮೇಲಿನ ಬಟ್ಟಲಿನಿಂದ ಮರಳು ಕೆಳಗಿನ ಬಟ್ಟಲಿಗೆ ಬರಲು ಹಿಡಿಯುವ ಸಮಯವೇ ಈ ವಿಧಾನದ ಕಾಲಮಾಪನ. ಇದರ ತಯಾರಿಕೆ ಮತ್ತು ಬಳಕೆ ಬಹಳ ಸುಲಭ. ಬ್ರಿಟೀಷ್ ನೌಕಾಪಡೆಯು ತನ್ನ ನೌಕೆಗಳಲ್ಲಿ ಕಾಲವನ್ನು 1820ರ ವರೆಗೂ ಅರ್ಧಗಂಟೆಯ ಮರಳು ಗಡಿಯಾರಗಳನ್ನು ಬಳಸುತ್ತಿದ್ದರು. ಇದನ್ನು ಸಂಶೋಧಿಸಿ ಸಾವಿರಾರು ವರ್ಷಗಳಾದರೂ, ಈಗಲೂ ಈ ಸಾಮಾನ್ಯ ಗಡಿಯಾರ ಪಾಶ್ಚಾತ್ಯ ದೇಶಗಳಲ್ಲಿ ಮೊಟ್ಟೆಯ ಕಾಲಮಾಪಕವೆಂದು ಇಂದಿಗೂ ಜನಪ್ರಿಯವಾಗಿದೆ ಮತ್ತು ಬಳಕೆಯಲ್ಲಿಯೂ ಇದೆ.

ನೆರಳಿನ ಸ್ತಂಭ

ನೆರಳಿನ ಸ್ತಂಭ (ಉಓಔಒಔಓ) ಇದು ಮಾನವ ವಿಜ್ಞಾನದ ಒಂದು ಹೊಸ ಅವಿಷ್ಕಾರ ಇದು ಭೂಮಿಯಲ್ಲಿ ನೆಟ್ಟಗೆ ಹೂಳಿದ ಸ್ತಂಭ. ಈ ಸ್ತಂಭ ಎಷ್ಟಾದರೂ ದಪ್ಪವಾಗಿರಬಹುದು ಅಥವಾ ಎಷ್ಟಾದರೂ ಎತ್ತರವಿರಬಹುದು ಆದರೆ ತುದಿ ಮಾತ್ರ ಚೂಪಾಗಿರಬೇಕು ಈ ಸ್ತಂಭದ ನೆರಳಿನ ಉದ್ದ ಗಾತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಬಹಳಷ್ಟು ಹೊಸ ವಿಷಯಗಳನ್ನು ನಮ್ಮ ಪೂರ್ವಜರು ತಿಳಿದುಕೊಂಡಿದ್ದರು.
ಈ ಸ್ತಂಭವು ನೆರಳು ಸೂರ್ಯೋದಯ, ಸೂರ್ಯಾಸ್ತದ ವೇಳೆಗಳಲ್ಲಿ ಬಹಳ ಉದ್ದವಾಗಿದ್ದು ಮಟಮಟ ಮಧ್ಯಾಹ್ನದಲ್ಲಿ ಎಲ್ಲಕ್ಕಿಂತ ಚಿಕ್ಕದಾಗಿರುತ್ತದೆ. ಇದರಲ್ಲಿ ಮುಖ್ಯವಾದದ್ದು ಮಧ್ಯಾಹ್ನದ ನೆರಳು ಪ್ರತಿದಿನವೂ ಮಧ್ಯಾಹ್ನದ ನೆರಳನ್ನು ಅಳತೆ ಮಾಡುತ್ತಾ ಹೋದರೆ ಅದರಲ್ಲೂ ವ್ಯತ್ಯಾಸಗಳು ಕಂಡುಬರುತ್ತದೆ. ಮಧ್ಯಾಹ್ನದ ನೆರಳು ಉದ್ದವಾಗಿರುವಾಗ ಅದು ದಕ್ಷಿಣಾಯನಾಂತ್ಯವೆಂದು ಅದು ಚಿಕ್ಕದಾಗಿರುವಾಗ ಉತ್ತರಾಯಣಾಂತ್ಯವೆಂದು ಪರಿಗಣಿಸುತ್ತಿದ್ದರು. ಈ ಎರಡರ ಮಧ್ಯದ ಅವಧಿ ಸುಮಾರು 180 ದಿನಗಳೆಂದು ಅಥವ ನೆರಳಿನ ಚಕ್ರ ಪೂರ್ತಿಯಾಗಲು 360 ದಿನಗಳೆಂದು ಇದೇ ಸಂವತ್ಸರದ ಅವಧಿ ಎಂದು ಹಿಂದಿನ ಕಾಲದವರು ತಿಳಿದು ಕೊಂಡಿದ್ದರು.

ಸೂರ್ಯನು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ನಾವೆಲ್ಲಾ ಓದಿದ್ದೇವಾದರು ಇದು ಪೂರ್ತಿ ನಿಜವಲ್ಲ. ವರ್ಷದಲ್ಲಿ ಎರಡೇ ದಿನಗಳು ಸೂರ್ಯ ಖಚಿತವಾಗಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ಮಿಕ್ಕದಿನಗಳಲ್ಲಿ ಅರ್ಧಕಾಲ ಪೂರ್ವ-ಪಶ್ಚಿಮ ರೇಖೆಯ ದಕ್ಷಿಣಕ್ಕೆ ಮಿಕ್ಕರ್ಥಕಾಲ ಈ ರೇಖೆಯ ಉತ್ತರಕ್ಕೆ ಉದಯಾಸ್ತಮಗಳಾಗುತ್ತವೆ. ಸುಮಾರು ಡಿಸೆಂಬರ್ 22ನೇಯ ತಾರಿಖಿನಿಂದ ದಕ್ಷಿಣದ ತುತ್ತ ತುದಿಯಲ್ಲಿ ಉದಯಾಸ್ತಮಗಳು ಆಗುತ್ತವೆ ಇದನ್ನು ದಕ್ಷಿಣಾಯನಾಂತ್ಯವೆಂದು ಕರೆಯುತ್ತಾರೆ. ಸುಮಾರು ಜೂನ್ 22ನೇ ತಾರೀಖು ಉತ್ತರದ ತುತ್ತ ತುದಿಯಲ್ಲಿ ಉದಯಾಸ್ತಗಳು ಆಗುತ್ತದೆ, ಇದನ್ನು ಉತ್ತರಾಯಣಾಂತ್ಯವೆಂದು ಕರೆಯುತ್ತಾರೆ. ಮಾರ್ಚ್ 21, ಸೆಪ್ಟೆಂಬರ್ 23ನೇ ತಾರೀಖುಗಳಲ್ಲಿ ಮಾತ್ರ ಸೂರ್ಯ ಸರಿಯಾಗಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾರೆ. ಇದನ್ನು ವಿಷುವತ್ ಎನ್ನುತ್ತಾರೆ.
ಭೂಮಿ ಒಂದು ಸೂರ್ಯ ಪ್ರದಕ್ಷಣೆಯನ್ನು ಮಾಡಿ ಬರುವುದಕ್ಕೆ ಹಿಡಿಯುವ ಕಾಲ 365.242199 ದಿನಗಳು:-

ಸೌರಗಡಿಯಾರ ಮತ್ತು ಆಧುನಿಕ ಗಡಿಯಾರದ ಸಮತೋಲನ ಪಟ್ಟಿ

ಸೌರ ಗಡಿಯಾರಕ್ಕೂ, ಆಧುನಿಕ ಹಲ್ಲಿನ ಚಕ್ರದ ಗಡಿಯಾರಕ್ಕೂ ಸಮಯದ ವ್ಯತ್ಯಾಸ ಕೇವಲ ಕೆಲವು ನಿಮಿಷಗಳು. ಇವು ಪ್ರತಿತಿಂಗಳ 1.10 ಮತ್ತು 20ನೇ ತಾರೀಖುಗಳಲ್ಲಿ ಹೆಚ್ಚು ಅಥವಾ ಕಡಿಮೆಯಾಗಿ ಗೋಚರವಾಗುತ್ತದೆ. ನಿಮಿಷಗಳ ವ್ಯತ್ಯಾಸವನ್ನು ಕೊಡಲಾಗಿದೆ.

 ತಿಂಗಳು		ತಾರೀಖು		ತಿಂಗಳು			ತಾರೀಖು
 		1.10.20
 ಜನವರಿ		3  8 11		ಜುಲೈ 			4  5  6
 ಫೆಬ್ರವರಿ 	14  14  14	ಆಗಸ್ಟ್			5  5  3
 ಮಾರ್ಚ್	12  1    8		ಸೆಪ್ಟೆಂಬರ್		0  3  6
 ಏಪ್ರಿಲ್		  4  1   -1	ಅಕ್ಟೋಬರ್		-0  03  -6
 ಮೇ		-3  04   -3	ನವೆಂಬರ್		-16 -16 -14
 ಜೂನ್		-2  -1   1		ಡಿಸೆಂಬರ್		-11 -7  -20

ಗ್ರೀಕರು ತಮ್ಮ ರೇಖಾಗಣಿತ ಪ್ರಾವಿಣ್ಯತೆಯನ್ನು ಉಪಯೋಗಿಸಿ ಪೌರ ಗಡಿಯಾರಗಳಲ್ಲಿ ಪ್ರಗತಿಯನ್ನು ಸಾಧಿಸಿದರು. ಕ್ರಿ.ಪೂ.250ರಲ್ಲಿ ಪರ್ಗಾದ ``ಅಪೊಲೋನಿಯಸ್ ಅರ್ಧಗೋಳಾಕಾರದ ಮುಖಫಲಕದ ಮೇಲೆ ಗಂಟೆ ರೇಖೆಗಳನ್ನು ಕೊರೆದರು. ಇದರಿಂದ ಬಹಳ ನಿಖರ ಕಾಲಗಣನೆ ಸಾಧ್ಯವಾಯಿತು.

ಟೊಲೇಮಿ ಎಂಬಾತ ಕ್ಷಿತಿಜೀಯ ಭಾಗಕ್ಕೆ ಅನುಸರಿಸಿ ವಿವಿಧ ಕೋನಗಳಲ್ಲಿ ರೇಖಾಗಣಿತಕ್ಕೆ ಅನುಗುಣವಾಗಿ ನೆರಳನ್ನು ವೀಕ್ಷಿಸಿ ಕಾಲಗಣನೆ, ಮಾಡುವ ವಿಧಾನವನ್ನು ಮಾಡಿದನು. ಇದಲ್ಲದೆ ಗ್ರೀಕರು ಲಂಭ ಕ್ಷಿತಿಜ ಮತ್ತು ವಾರೆಯ ಮುಖ ಫಲಕಗಳಲ್ಲಿ ಗಂಟೆಗಳ ಗುರುತು ಉಪಯೋಗಿಸುತ್ತಿದ್ದರು. ಇದು ಅಥೆನ್ಸನಲ್ಲಿರುವ ಕ್ರಿ.ಪೂ 100ರಲ್ಲಿ ನಿರ್ಮಿಸಿದ ಗಾಳಿಗಡಿಯಾರದಲ್ಲಿರುವ ಎಂಟು ಸೌರಗಡಿಯಾರಗಳಿಂದ ವಿಧಿತವಾಗುತ್ತದೆ.
ಗ್ರೀಕರು ತತ್ವ ಮತ್ತು ಆಕಾರ ರೀತಿಯನ್ನು ಅನುಕರಿಸಿ, ಅರಬರು ಸೌರ ಗಡಿಯಾರದ ತಯಾರಿಕೆಗೆ ಪ್ರಾಮುಖ್ಯತೆ ನೀಡಿದರು. ``ತ್ರಿಕೋನಮಿತಿ'' ತತ್ವಗಳ ಆಧಾರದಿಂದ ಸೌರಗಡಿಯಾರಗಳಲ್ಲಿ ವಿಧಾನ ಮತ್ತು ಆಕಾರಗಳಲ್ಲಿ ಅನೇಕ ಮಾರ್ಪಾಡುಗಳನ್ನೂ ಮಾಡಿದರು.

ಗ್ರೀನ್ ವಿಚ್ ಮೀನ್ ಟೈಂ

ಕಾಲವನ್ನು ಅಳೆಯಲು ಒಂದು ನಿಗದಿಯಾದ ಸರ್ವಮಾನ್ಯ ಮಾನವನ್ನು ನಿರ್ಧರಿಸಲು ಅನೇಕ ಶತಮಾನಗಳ ವರೆವಿಗೂ ಆಗಿರಲಿಲ್ಲ. ಜಗತ್ತು ಅಭಿವೃದ್ಧಿ ಶೀಲ ಮಾರ್ಗದಲ್ಲಿ ತ್ವರೆಯಿಂದ ಮುಂದುವರಿಯಲು ರಾಷ್ಟ್ರ ರಾಷ್ಟ್ರಗಳ ಸಂಬಂಧಗಳು ನಿಕಟವಾದಂತೆ ಕಾಲದ ಮಾನದಲ್ಲಿ ಒಂದು ಸರ್ವಮಾನ್ಯವಾದ ಗಣನೆಯ ಅವಶ್ಯಕತೆ ಉಂಟಾಯಿತು.

ಇಂತಹ ಒಂದು ಅತ್ಯವಶ್ಯಕ ಜರೂರು ಅವಶ್ಯಕತೆಯನ್ನು ಮನಗಂಡ ಅಮೇರಿಕಾ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ 1884ರಲ್ಲಿ ಕಾಲವನ್ನು ಮುಖ್ಯ ಮಾನವನ್ನು ನಿಗದಿಮಾಡುವ ಉದ್ದೇಶದಿಂದ ಪ್ರಪಂಚದ ಎಲ್ಲಾ ಮುಖ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಿತು. ಆ ವೇಳೆಗೆ ಬ್ರಿಟನ್ ಸುಸಜ್ಜಿತ ಸಮೃದ್ಧ ನೌಕಾಸೇನೆಯಿಂದಾಗಿ ಸಮುದ್ರ ಯಾನದಲ್ಲಿ ಅಗ್ರಮಾನ್ಯ ಸ್ಥಾನ ಪಡೆದು ನೌಕಾಚಲನ ಮತ್ತು ನಿಯಂತ್ರಣಗಳ ಅಧ್ಯಯನಕ್ಕೆ ಗ್ರೀನ್‍ವಿಚ್ ಎಂಬ ಹಳ್ಳಿಯಲ್ಲಿ ಒಂದು ದೊಡ್ಡ ಸುಸಜ್ಜಿತ ಖಗೋಳ ವಿಜ್ಜನ ಮಂದಿರವನ್ನು ಹೊಂದಿತ್ತು. ಯು.ಎಸ್.ಎ ಯಲ್ಲಿ ನೆರೆದಿದ್ದ ರಾಷ್ಟ್ರಗಳ ಸಮ್ಮೇಳನದಲ್ಲಿ ಇಂಗ್ಲೆಂಡಿನ ಸಲಹೆಯಂತೆ ಭೂಗೋಳದ ಮೇಲೆ ಉತ್ತರದಿಂದ ದಕ್ಷಿಣಾಭಿಮುಖವಾಗಿ ಗೋಳವನ್ನು 360 ಡಿಗ್ರಿ ಎಂದು ವಿಭಾಗಿಸಿ ಕಲ್ಪನಾ ರೇಖೆಗಳನ್ನು ಎಳೆದರು.

ಈ ರೇಖೆಗಳು ಗ್ರೀನ್‍ವಿಚ್ ಖಗೋಳ ವೀಕ್ಷಣಾ ಮಂದಿರದಿಂದ ಪ್ರಾರಂಭವಾಗಿ ಪೂರ್ವ ಪಶ್ಚಿಮಕ್ಕೆ 15 ಡಿಗ್ರಿ ಅಂತರದಲ್ಲಿದೆ. ಗ್ರೀನ್‍ವಿಚ್‍ನ ಮಧ್ಯಾಹ್ನ 12 ಗಂಟೆಯನ್ನು ನಿರ್ದಿಷ್ಟವಾಗಿಟ್ಟುಕೊಂಡು ಅಲ್ಲಿಂದ ಪಶ್ಚಿಮಕ್ಕೆ ಹೋದಂತೆ ಪ್ರತಿ 15 ಡಿಗ್ರಿಗಳಿಗೆ 1 ಗಂಟೆಯ ಸಮಯವನ್ನು ಕಳೆದು ಕಡಿಮೆಮಾಡಬೇಕೆಂದು ಪೂರ್ವಕ್ಕೆ ಹೋದಂತೆ ಪ್ರತಿ 15 ಡಿಗ್ರಿಗೆ 1 ಗಂಟೆಯನ್ನು ಕೂಡಿಸಿ ಹೆಚ್ಚು ಮಾಡುತ್ತಾ ಹೋಗಬೇಕೆಂದು ನಿರ್ಧರಿಸಲಾಯಿತು.
ಪೂರ್ವಪಶ್ಚಿಮಕ್ಕೆ ಪ್ರತಿ 20 ಡಿಗ್ರಿಗೆ 1 ವಲಯ, 1 ಗೋಳ ಎಂದು ಭೂಪಟಗಳ ಮೇಲೆ ಲೆಕ್ಕಿಸಿದರು. ಕಾಲವನ್ನು ಲೆಕ್ಕಿಸುವ ಈ ವಿಧಾನವನ್ನು ಎಲ್ಲಾ ರಾಷ್ಟ್ರಗಳೂ ಒಪ್ಪಿಕೊಂಡವು. ಹೀಗೆ ಗ್ರೀನ್‍ವಿಚ್‍ನಿಂದ ಪ್ರಾರಂಭಿಸಿ ರೇಖಾಂಶಗಳಿಗೆ ಸಂಬಂಧಿಸಿರುವ ಪೂರ್ವಪಶ್ಚಿಮ ವಲಯಗಳು ಸಂಧಿಸುವ ಸ್ಥಳಕ್ಕೆ ಅಂತರರಾಷ್ಟ್ರೀಯ ದಿನಾಂಕ ರೇಖೆಯೆಂದು ಹೆಸರಿಸಲಾಯಿತು.

ಗ್ರೀನ್‍ವಿಚ್‍ನಿಂದ ಪ್ರಾರಂಭಿಸಿ ಪಶ್ಚಿಮಾಭಿಮುಖವಾಗಿ ಪಯಾಣಿಸುವವರು ಈ ರೇಖಂಶಕ್ಕೆ ಬಂದಾಗ ತಮ್ಮ ಗಡಿಯಾರದಲ್ಲಿ 24 ಗಂಟೆಗಳನ್ನು ಹಿಂದೆ ತಿರುಗಿಸಿ ಒಂದು ದಿನವನ್ನು ಹಿಂದೆ ಹಾಕಬೇಕು. ಅದೇ ಪೂರ್ವಾಭಿಮುಖವಾಗಿ ಪ್ರಯಾಣ ಮಾಡುವವರು ತಮ್ಮ ಗಡಿಯಾರವನ್ನು ಮುಂದೂಡಿ ಒಂದು ದಿನವನ್ನು ಹೆಚ್ಚಿಸಬೇಕು. 1884ರಲ್ಲಿ ಇಡೀ ಜಗತ್ತಿನ ಕಾಲಗಣನೆಯು ಒಂದು ಅಧಿಕೃತ ನಿರ್ದಿಷ್ಟ ಮಾನವು ಜಾರಿಗೆ ಬಂದಿತು. ಇದನ್ನೇ ಗ್ರೀನ್‍ವಿಚ್ ಮೀನ್ ಟೈಂ ಜಿ.ಎಂ.ಟಿ(ಉ.ಒ.ಖಿ) ಎಂದು ಕರೆಯುತ್ತಾರೆ.

ಸ್ವಯಂಚಾಲಿತ ಗಡಿಯಾರವನ್ನು 1928ರಲ್ಲಿ ಜಾನ್ ಹಾರ್‍ವಾಡ) (ಎohಟಿ ಊಚಿಡಿತಿooಜ) ಎಂಬುವರು ಕಂಡುಹಿಡಿದರು.

ಒಂದು ಗಡಿಯಾರದ ---------
ಒಂದು ದಿವಸಕ್ಕೆ ಯಾಂತ್ರಿಕ ಗಡಿಯಾರ 4,00,000 ಸತಿ ಟಿಕ್ ಟಿಕ್ ಎಂದು ಶಬ್ದಮಾಡುತ್ತದೆ.
Uಡಿಯಾರದ ಒಳಗಿರುವ ದೀಪ(ಬಲ್ಪ್) ಗುಂಡುಸೂಜಿಯ ತಲೆಗಿಂತ ಚಿಕ್ಕದಾಗಿರುತ್ತದೆ.

ಆಶ್ಚರ್ಯಕರ ಗಡಿಯಾರಗಳು

ಬಹುಪಯೋಗಿ ಕೈಗಡಿಯಾರ : ಮನೆಯಲ್ಲಿರುವ ಟಿ.ವಿ.ವಿಡಿಯೋ ಮೊದಲಾದವುಗಳನ್ನು ರಿಮೋಟ್ ಕಂಟ್ರೋಲ್‍ನಿಂದ ನಿಯಂತ್ರಿಸಬಹುದು. ರಿಮೋಟ್ ಕಂಟ್ರೋಲ್‍ನಂತೆ ಕೆಲಸ ಮಾಡುವ ಒಂದು ಗಡಿಯಾರ ಬಂದಿದೆ. ಇದರ ನೆರವಿನಿಂದ ಟಿವಿಯ ಶಬ್ದವನ್ನು ಕಡಿಮೆಮಾಡಬಹುದು ಅಥವ ಹೆಚ್ಚಿಸಬಹುದು ಆರಿಸಲು ಮರೆತ ದೀಪ ಫ್ಯಾನ್‍ಗಳನ್ನು ಮನೆಯ ಹೊರಗೆ ನಿಂತು ಕೊಂಡೆ ಆರಿಸಬಹುದು. ಇಷ್ಟೆ ಅಲ್ಲದೆ ಇದು ಸಮಯ ತಾರೀಖು ಎಲ್ಲವನ್ನೂ ತೋರಿಸುತ್ತದೆ. ಗಣಕ ಯಂತ್ರ ಆಲಾರಂ ಕೂಡ ಈ ಕೈಗಡಿಯಾರದಲ್ಲಿ ಅಡಕವಾಗಿದೆ ಇದು ಬಹು-ಉಪಯೋಗಿ ಕೈಗಡಿಯಾರ.

ಸ್ಪಾಚ್‍ಟಾಕ್ ; ಸ್ಪಾಚ್ ಟಾಕ್ ಎಂಬ ಹೆಸರಿನ ಈ ಕೈಗಡಿಯಾರದಲ್ಲಿ ದೂರವಾಣಿ ವ್ಯವಸ್ಥೆಯೂ ಮಿಳಿತಗೊಂಡಿದೆ. ಮನೆಯಲ್ಲಿರುವ ಅಥವಾ ಸಮೀಪದ ಮನೆಗಳ ದೂರವಾಣಿಯೊಡನೆ ಸಂಪರ್ಕ ಕಲ್ಪಿಸಿ ಈ ಗಡಿಯಾರವನ್ನು ಕಿವಿಯಬಳಿ ಹಿಡಿದು ಮಾತನಾಡಬಹುದು. ಮನೆಯಲ್ಲಿ ಎಲ್ಲರೂ ಒಂದೊಂದು ಗಡಿಯಾರ ಕಟ್ಟಿಕೊಂಡು ತಮ್ಮತಮ್ಮ ಕೊಠಡಿಗಳಿಂದಲೇ ಸಂಪರ್ಕ ನಡೆಸಬಹುದು. ಮನೆಯಲ್ಲಿ ಯಾರು ಇರದಿದ್ದರೆ ಪಕ್ಕದ ಮನೆಯವರ ಜೊತೆ ಮಾತನಾಡುತ್ತಾ ಕಾಲಕಳೆಯಬಹುದು.

ಮಾತನಾಡುವ ಗಡಿಯಾರ : ಈ ಗಡಿಯಾರದಲ್ಲಿ ಒಂದು ಗುಂಡಿಯನ್ನು ಒತ್ತಿದರೆ ಒಳಗಿನಿಂದ ಮಾತನಾಡುವ ಶಬ್ದ ಒಂದು ಗಂಟೆ,ನಿಮಿಷ ಮತ್ತು ಕ್ಷಣಗಳನ್ನು ತಿಳಿಸುತ್ತದೆ. ಇದಕ್ಕೆ ಅಲಾರಮ್ ಸಹ ಇದೆ. ಅಲಾರಮ್ ಹೊಡೆದು ಎರಡು ಸೆಕೆಂಡ್ ತರುವಾಯ ಹರಿಯಪ್ ಎಂದು ಎಚ್ಚರಿಸುತ್ತದೆ.

ಸುದೀರ್ಘ ಆಯುಷ್ಯದ ಗಡಿಯಾರ : ಇದರ ಅಪೂರ್ವ ವೈಶಿಷ್ಟ್ಯವೇನೆಂದರೆ ಇದು ವರ್ಷಕ್ಕೆ ಒಂದು ಬಾರಿ ಟಿಕ್ ಎಂದು ಶಬ್ದ ಮಾಡುತ್ತದೆ. ಸಾವಿರ ವರ್ಷಕ್ಕೆ ಒಮ್ಮೆ ಗಂಟೆಯ ಶೃತಿ ಹೊರಡಿಸುತ್ತದೆ. ಈ ಗಡಿಯಾರ ಹತ್ತು ಸಾವಿರ ವರ್ಷಗಳ  ಸುದೀರ್ಘ ಅವಧಿಯವರೆಗೆ ಕರ್ತವ್ಯಶೀಲವಾಗಿರುತ್ತದೆ. ಈ ಗಡಿಯಾರಕ್ಕೆ ಬ್ರಿಟೀಷ್ ಸಂಗೀತಗಾರ ``ಬ್ರಿಯಾನ ಇನೊ ಸಂಗೀತದ ವ್ಯವಸ್ಥೆಯನ್ನು ಮಾಡಿದ್ದಾನೆ. ಇದು 1991ರಲ್ಲಿ ಲಂಡನ್ನಿನ ವಿಜ್ಞಾನ ವಸ್ತು-ಸಂಗ್ರಹಾಲಯದಲ್ಲಿ ಈ ಗಡಿಯಾರ ಸೃಷ್ಟಿಯಾಗಿದೆ.  ಇದರ ನಿರ್ಮಾಪಕ ಕಾಲಮಾಪನ ತಜ್ಞ ಡೆವಿಡ್ ಹಿಲ್ಲಿಸ್.

ಅಜ್ಜನ ಗಡಿಯಾರ :ಉದ್ದನೆಯ ಗೋಡೆ ಗಡಿಯಾರಗಳನ್ನು ಅಜ್ಜನಗಡಿಯಾರ ಅಥವ `ಗ್ರಾಂಡ್ ಫಾದರ್ ಗಡಿಯಾರ ಮತ್ತು ಶವಪೆಟ್ಟಿಗೆ ತರಹ ಇರುವುದರಿಂದ ಶವಪೆಟ್ಟಿಗೆ ಗಡಿಯಾರ ಎಂದು ಕೂಡ ಅನ್ನುತ್ತಿದ್ದರು. 1876ರಲ್ಲಿ ಹೆನ್ರಿಕ್ಲೇಯವರ ಹಾಡು ಒಥಿ ಉಡಿಚಿಟಿಜ ಈಚಿಣheಡಿ's ಅಟoಛಿಞ ನಿಂದ ಈ ಹೆಸರು ಬಂತು.

ಬಿಗ್ ಬೆನ್‍ಗೋಪುರ ಗಡಿಯಾರ : ಇದನ್ನು 1850ರಲ್ಲಿ ಮೊದಲನೇ ಎಡ್ವರ್ಡ್ ರಾಜರಾಗಿದ್ದಾಗ ಎಡ್ಮಂಡ್ ಬಿಕೆಟ್ ಮತ್ತು ಬ್ಯಾರನ್ ಗ್ರೀಮ್ ಥ್ರೋಪ್ ಎಂಬುವರು ಇದನ್ನು ಸ್ಥಾಪಿಸಿದರು. ಗಂಟೆಯ ಭಾರ 13 ಟನ್ ಎತ್ತರ 314 ಅಡಿ ಮುಖ ಫಲಕದ ಅಗಲ 23 ಅಡಿ ಇದರ ನಿಮಿಷ ಸೂಚಿ ಮುಳ್ಳಿನ ಉದ್ದ 14 ಅಡಿ ಇದ್ದು 13 ಅಡಿ ಉದ್ದದ ಲೋಲಕವಿದೆ. ಪ್ರತಿ ಅಂಕಿಗಳ ಎತ್ತರವು  2 ಅಡಿ ಇದ್ದು ನಿಮಿಷ ವ್ಯತ್ಯಾಸದ ದೂರ 1 ಅಡಿ. ಇದು ಅತ್ಯಂತ ನಿಖರವಾಗಿ ಕಾಲಸೂಚಿಯಾಗಿದೆ ಮತ್ತು ಇಂಪಾಗಿ ಗಂಟೆ ಹೊಡೆಯುತ್ತದೆ.

ಮೊತ್ತ ಮೊದಲಿನ ದೊಡ್ಡ ಗೋಪುರದ ಗಡಿಯಾರ 1335ರಲ್ಲಿ ಇಟಲಿ ದೇಶದ ಮಿಲಾನ್‍ನಗರದಲ್ಲಿ ಸ್ಥಾಪನೆಯಾಯಿತು. 1386ರಲ್ಲಿ ಇಂಗ್ಲೆಂಡಿನ ಸ್ಯಾಲಿಸ್‍ಬರಿ ಕೆಥೆಡ್ರೆಲ್‍ನಲ್ಲಿ ಇನ್ನೊಂದು ಗೋಪುರದ ಗಡಿಯಾರ ಸ್ಥಾವಿಸಲಲ್ಡ್ಟ್ಟಿತು. ಇದರಲ್ಲಿ ಫಲಕದ ಮೇಲೆ ಯಾವ ಚಿಹ್ನೆಗಳೂ ಇಲ್ಲ. ಕಾಲವನ್ನು ಗಂಟೆ ಹೊಡೆದು ಸೂಚಿಸುತ್ತದೆ. ಇದು ಈಗಲೂ ಕೂಡ ಚಲಿಸುತ್ತಿದೆ. ಇದು ಚಲನೆಯಲ್ಲಿರುವ ಅತಿ ಪುರಾತನ ಗೋಪುರದ ಗಡಿಯಾರ. ಇದನ್ನು ವಿಳ್ವಷೈರ್‍ನ ``ಸಾಲಿಸ್‍ಬರಿ ಕಥೆಡ್ರೆಲ್ ವಸ್ತುಪ್ರದರ್ಶನಾಲಯದಲ್ಲಿ ಇಟ್ಟಿದ್ದಾರೆ.

ಮೈಸೂರಿನ ದೊಡ್ಡ ಗಡಿಯಾರ : ಕ್ಲಾಕ್ ಟವರ್ ಎಂದು ಕರೆಯಲಾಗುವ ಈ ಗಡಿಯಾರ ನಗರದ ಮಧ್ಯಭಾಗದಲ್ಲಿರುವ ಅರಮನೆ ಮತ್ತು ಪುರಭವನದ ಸಮೀಪದಲ್ಲಿದೆ. 1927ರಲ್ಲಿ ಸಿದ್ಧವಾದ ಈ ಗಡಿಯಾರ ಅಂದಿನಿಂದಲೂ ಮೈಸೂರು ಜನರ ಸಮಯದ ಒಡನಾಡಿ. ಗಡಿಯಾರದ ಮೇಲ್ಭಾಗದಲ್ಲಿ ಹಿತ್ತಾಳೆಯ ಗಂಟೆಯಿದ್ದು ಗಂಟೆಗೆ ಕಬ್ಬಿಣದ ಸುತ್ತಿಗೆಯೊಂದು ಹೊಡೆದಾಗ ಶಬ್ದ ಅಲೆಅಲೆಯಾಗಿ ಕೇಳಿಬರುತ್ತಿತ್ತು. ಆದರೆ ಈಗ ಇದು ಗಂಟೆಹೊಡೆಯುತ್ತಿಲ್ಲಾ.

``ಫ್ರಾನ್ಸ್ ನಿಂದ ಬಂದ ಈ ಗಂಟೆ ಹಿತ್ತಾಳೆಯದು. ಇದು 4 ಅಡಿ ಎತ್ತರ 4 ಅಂಗುಲ ದಪ್ಪ ಮತ್ತು 50 ಅಂಗುಲ ಅಗಲವಿದೆ. ಗಂಟೆಯ ಮೇಲ್ಭಾಗವನ್ನು ತೊಲೆಯೊಂದಕ್ಕೆ ತೂಗುಹಾಕಲಾಗಿದೆ. ಗಂಟೆಯ ಮೇಲ್ಭಾಗದಲ್ಲಿ ಗುಮುಟವಿದೆ. ಅದರ ಮೇಲೊಂದು ಚಿನ್ನದ ಮುಲಾಮು ಲೇಪಿತ ಕಳಸವಿದೆ.

ಗೋಪುರವನ್ನು ಗಾರೆ ಗಚ್ಚಿನಿಂದ ಕಟ್ಟಲಾಗಿದೆ. ಈ ಗೋಪುರವನ್ನು ಕಟ್ಟಲು ತೆಗೆದುಕೊಂಡ ಕಾಲಾವಧಿ ಕೇವಲ 60 ದಿನಗಳು. ಇಡೀ ಗೋಪುರದ ನಿರ್ಮಾಣದ ವೆಚ್ಚ ಆಗ ಕೇವಲ 7 ಸಾವಿರ ರೂಪಾಯಿಗಳು. ಈ ಗಡಿಯಾರ ವಿದ್ಯುತ್ ಚಾಲಿತವಾಗಿದೆ. ಮೊದಲು 4 ದಿಕ್ಕಿನಲ್ಲೂ ರೋಮನ್ ಅಂಕೆಗಳಿದ್ದ ಮುಖಫಕಗಳಿತ್ತು. 1994ರಲ್ಲಿ ಕನ್ನಡ ಜಾಗೃತಿ ವರ್ಷದ ನೆನಪಿಗಾಗಿ ರೋಮನ್ ಅಂಕೆಗಳನ್ನು ತೆಗೆದು ಕನ್ನಡ ಅಂಕೆಗಳನ್ನು ಮುಖಫಲಕಕ್ಕೆ ಅಳವಡಿಸಲಾಗಿದೆ. ಈ ಗೋಪುರದ ಗಡಿಯಾರದ ಎತ್ತರ 92 ಅಡಿ. ಗಡಿಯಾರದಲ್ಲಿ ಸಮಯವ್ಯತ್ಯಾಸವಾದರೆ ಗೋಪುರದ ಒಳಗೆ ಪ್ರವೇಶಿಸಿ ಸರಿಪಡಿಸುವ ವ್ಯವಸ್ಥೆಯಿದೆ.

ಈ ದೊಡ್ಡ ಗಡಿಯಾರವನ್ನು ಸಿಲ್ವರ್ ಜ್ಯೂಬಿಲಿ ಕ್ಲಾಕ್‍ಟವರ್ ಎಂದು ಕರೆಯುತ್ತಾರೆ. 25 ವರ್ಷಗಳ ಆಳ್ವಿಕೆಯನ್ನು ಪೂರೈಸಿದ ಶ್ರಿಮಾನ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ರಜತ ಮಹೋತ್ಸವ ಸ್ಮಾರಕವಾಗಿರುವಂತೆ ಈ ಗೋಪುರದ ಗಡಿಯಾರ ಪ್ರತಿಷ್ಠಾಪನೆಯಾಗಿದೆ.

ಈ ಸ್ಥಾಪನೆಯ ಇತಿಹಾಸವನ್ನು ಕನ್ನಡ, ಸಂಸ್ಕøತ, ಇಂಗ್ಲೀಷ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಅಮೃತ ಶಿಲೆಯ ಮೇಲೆ ಸುವರ್ಣಕ್ಷರದಲ್ಲಿ ಕೆತ್ತಲಾಗಿದೆ. ಈ ಐತಿಹಾಸಿಕ ಗಡಿಯಾರ ಮೈಸೂರಿನ ಸೌಂದರ್ಯದ ಗರಿ ಅಷ್ಟೇ ಅಲ್ಲದೆ ಮೈಸೂರು ನಗರದ ದೊಡ್ಡ ಗಡಿಯಾರವೆಂದು ಹೆಸರು ಪಡೆದಿದೆ.

ಗಡಿಯಾರದ ಸಂಶೋಧಕರು

 1480ರಲ್ಲಿ ನೂರಮಾ ಬರ್ಗನ್ ಬೀಗದ ತಯಾರಕರಾದ `ಪೀಟರ್ ಹೆನ್‍ಲಿನ್ ಎಂಬುವರು ಮೊಟ್ಟ ಮೊದಲಿನ ಗಡಿಯಾರದ ಸ್ಪ್ರಿಂಗ್‍ನ್ನು ಕಂಡು ಹಿಡಿದರು.
 1571ರಲ್ಲಿ ಇಂಗ್ಲೆಂಡ್ ದೇಶದ `ನ್ಯೂ ಸ್ಯಾಮ್ ಎಂಬುವರು ಮೊಟ್ಟ ಮೊದಲ ಕೈಗಡಿಯಾರವನ್ನು ಕಂಡು ಹಿಡಿದರು. ಈ ಗಡಿಯಾರಕ್ಕೆ ಗಂಟೆ ತೋರಿಸುವ ಒಂದೇ ಮುಳ್ಳಿತ್ತು.
 1620ರಲ್ಲಿ ಇಂಗ್ಲೆಂಡ್ ಗಡಿಯಾರದ ತಯಾರಕರಾದ `ನಿಬ್ ಅಂಡ್ ಕ್ಪಾರೇ ಎಂಬುವರು ಗಡಿಯಾರಕ್ಕೆ ನಿಮಿಷದ ಮುಳ್ಳನ್ನು ಅಳವಡಿಸಿದರು.
 1685ರಲ್ಲಿ ಇಂಗ್ಲೆಂಡ್ ದೇಶದ `ರಾಬರ್ಟ್‍ಹೆವೀಕ್ ಎಂಬುವರು ಹೇರ್ ಸ್ಪ್ರಿಂಗ್‍ನ್ನು ಕಂಡುಹಿಡಿದರು.
 1685ರಲ್ಲಿ ಇಂಗ್ಲೆಂಡ್ ದೇಶದ `ರಾಬರ್ಟ್ ಹೋಕ್ ಎಂಬುವರು ಹೇರ್ ಸ್ಪ್ರಿಂಗ್‍ನ್ನು ಕಂಉ ಹಿಡಿದರು.
 1704ರಲ್ಲಿ ಸ್ವಿಟ್ಜರ್ಲೆಂಡಿನ `ನಿಕಲೋಸ್ ಫೇಸಿಯೋ ಎಂಬುವರು ಗಡಿಯಾರದ  ಜ್ಯೂಯೆಲ್‍ನ್ನು ಕಂಡು ಹಿಡಿದರು.
 2962ರಲ್ಲಿ `ಜಾನ್ ಹ್ಯಾರಿಸನ್ ಎಂಬುವರು ಮೊಟ್ಟ ಮೊದಲಿನ ನೌಕಾ ಕ್ರೋನೋ ಮೀಟರ್ ಗಡಿಯಾರವನ್ನು ಕಂಡು ಹಿಡಿದರು.
 1926ರಲ್ಲಿ ಜಲ ನಿಯಂತ್ರಣ (Wಚಿಣeಡಿ Pಡಿooಜಿ) ಕೇಸನ್ನು ಸ್ವಿಟ್ಜರ್‍ರ್ಲೆಂಡಿನ ಹೆಚ್.ವಿಲ್ಸ್ ಡೋರೆ ಎಂಬುವರು ತಯಾರಿಸಿದರು.
 1928ರಲ್ಲಿ ಜಾನ್ ಹಾರ್ ವುಡ್ ಮೊಟ್ಟ ಮೊದಲಿನ ಸ್ವಯಂಚಾಲಿತ ಗಡಿಯಾರವನ್ನು ಸಂಶೋಧಿಸಿದರು.
 18ನೇ ಶತಮಾನದಲ್ಲಿ ಇಂಗ್ಲೆಂಡಿನ `ಡೆನಿಯರ್ ಕ್ವಾರೇ ಗಡಿಯಾರದ ಕೇಸಿನ ಹಿಂಭಾಗದಲ್ಲಿರುವ ಮುಚ್ಚಳದ ಮೇಲೆ ನಂಬರ್‍ಗಳನ್ನು ಅಳವಡಿಸಿದರು. ಇದರಿಂದ ಗಡಿಯಾರ ಕಳುವಾದರೆ ಹುಡುಕಲು ಅನುಕೂಲವಾಯಿತು.
 1949ರಲ್ಲಿ ಅಮೆರಿಕಾದ `ಡಾ.ಹೈಲಾಡ್ ಪರಮಾಣು ಗಡಿಯಾರವನ್ನು ಕಂಡು ಹಿಡಿದರು.

ಪರಮಾಣು ಗಡಿಯಾರ

ಮರಳು ಗಡಿಯಾರದಿಂದ ಆರಂಭಗೊಂಡ ಸಮಯದ ವಿಶ್ಲೇಷಣೆ ಇಂದು ಪರಮಾಣು ಗಡಿಯಾರಕ್ಕೆ ಬಂದು ನಿಂತಿದೆ. ಗಡಿಯಾರಗಳಲ್ಲಿ ಹೆಚ್ಚು ಕರಾರುವಾಕ್ಕಾಗಿ ತೋರಿಸುವ ಗಡಿಯಾರವೇ ಪರಮಾಣು ಗಡಿಯಾರ (ಅಟಾಮಿಕ್ ಕ್ಲಾಕ್).

ಇದು ಎಷ್ಟು ನಿರ್ದಿಷ್ಟವಾದ ಕಾಲವನ್ನು ತೋರಿಸುತ್ತದೆಂದರೆ 30,000 ವರುಷಗಳ ದೀರ್ಘಾವಧಿಯಲ್ಲಿ ಕೇವಲ 1 ಸೆಕೆಂಡ್ ವ್ಯತ್ಯಾಸ ಬರಬಹುದು.

ಇದು ಪರಮಾಣು ಗಡಿಯಾರವಾದರೂ ಇದು ಒಂದು ವಿದ್ಯುತ್ ಗಡಿಯಾರವಾಗಿದೆ. ಏಕೆಂದರೆ ಇದು ಪರಮಾಣುಗಳ ಕಂಪನದಿಂದ ಉಂಟಾಗುವ ವಿದ್ಯುತ್ ಬಲದಿಂದ ಚಲಿಸುತ್ತದೆ.

	1949ರಲ್ಲಿ ಅಮೆರಿಕಯ ವಿಜ್ಞಾನಿ ಡಾ.ಹೈಲಾಡ್ ಎಂಬುವರು ಪರಮಾಣು ಗಡಿಯಾರವನ್ನು ಕಂಡು ಹಿಡಿದರು. ಇದನ್ನು ತಯಾರಿಸಿದವರು ಅಮೆರಿಕಾದ `ಬ್ಯೂರೋ ಆಫ್ ಸ್ಟ್ಯಾಂಡರ್ಡ್ ಸಂಸ್ಥೆಯವರು. ಇದರಲ್ಲಿ ಅಮೋನಿಯ ಅಣುಗಳ ಬಳಕೆ ಮಾಡಲಾಯಿತು.

ಈ ಗಡಿಯಾರ ನಡೆಯುವ ವಿಧಾನವನ್ನು ತಿಳಿಯಬೇಕಾದರೆ ಮೊದಲು ಅಮೋನಿಯ ಅಣುವಿನ ರಚನೆಯನ್ನು ತಿಳಿಯಬೇಕು.

ಶೀರ್ಷಭಾಗದಲ್ಲಿ ಸಾರಜನಕ ಒಂದು ಪರಮಾಣು ಮತ್ತು ಜಲಜನಕ 3 ಪರಮಾಣುಗಳಿರುತ್ತವೆ. ಉಚ್ಛಾವರ್ತಿಯ ತರಂಗಗಳು ಅಮೋನಿಯ ಅನಿಲವನ್ನು ಉತ್ತೇಜನಗೊಳಿಸಿದಾಗ ಸಾರಜನಕದ ಪರಮಾಣುಗಳು ಕಂಪನಗೊಂಡು ಚಲಿಸತೊಡಗುತ್ತವೆ. ಕಂಪನದಿಂದ ಉತ್ಪತ್ತಿಯಾಗುವ ಬಲದಿಂದ ಗಡಿಯಾರಕ್ಕೆ ಚಲನೆ ಸಿಗುತ್ತದೆ.

ಆಧುನಿಕ ಪರಮಾಣು ಗಡಿಯಾರಗಳಲ್ಲಿ ಅಮೋನಿಯ ಬದಲಾಗಿ ಸಿಸಿಎಂ ಎಂಬ ಅನಿಲವನ್ನು ಬಳಸಲಾಗುತ್ತದೆ. ಇದರ ಒಂದು ಪರಮಾಣು ಸೆಕೆಂಡಿಗೆ 9,19,26,31,770 ಬಾರಿ ಕಂಪಿಸುತ್ತದೆ.
ಪರಮಾಣು ಗಡಿಯಾರಗಳ ಪರಿಶುದ್ಧತೆ ಆಧಾರದ ಮೇಲೆ ವಿಜ್ಞಾನಿಗಳು ಸಮಯದ ಪರಿಭಾಷೆಯನ್ನೇ ಬದಲಾಯಿಸಿದ್ದಾರೆ.

ಈಗ ಸೆಕೆಂಡ್ ಅಂದರೆ ಒಂದು ಸೌರ ದಿವಸದ 86,400 ಭಾಗವಲ್ಲ.

ಸಿಸಿಎಂ ಪರಮಾಣು ಕಂಪಿಸುವ 9,19,26,31,770 ಸಂಖ್ಯೆಯೇ ಒಂದು ಸೆಕೆಂಡ್.

ಗಡಿಯಾರದ ರಹಸ್ಯಗಳು
 ಗಡಿಯಾರದ ಒಳಗಿರುವ ಬ್ಯಾಲೆನ್ಸ್ ಚಕ್ರವು ಗಂಟೆಗೆ 60 ಮೈಲಿ ಓಡುವ ಇಂಜಿನ್ನಿನ ವೇಗದಲ್ಲಿ ಚಲಿಸುತ್ತಿರುತ್ತದೆ
 ಗಡಿಯಾರದ ಬ್ಯಾಲೆನ್ಸ್ ಚಕ್ರ ಒಂದು ವರ್ಷಕ್ಕೆ ಸುಮಾರು 16 ಕೋಟಿಸಲ ತಿರುಗಿರುತ್ತದೆ.
 ಬ್ಯಾಲೆನ್ಸ್ ಚಕ್ರದಿಂದ ಹೊರಬರುವ ಟಿಕ್ ಟಿಕ್ ಶಬ್ದವು ಒಂದು ದಿನಕ್ಕೆ 400 ಸಾವಿರ ಸಲವಾಗಿರುತ್ತದೆ.
 ಬ್ಯಾಲೆನ್ಸ್ ಚಕ್ರ, ಬ್ಯಾಲೆನ್ಸ್ ಸ್ಪ್ರಿಂಗ್, ಲಿವರ್ ಮತ್ತು ಎಸ್ಕೇಪ್‍ವೀಲ್ ಇದೇ ಗಡಿಯಾರದ ಹೃದಯ.
 ಬ್ಯಾಲೆನ್ಸ್ ಸ್ಪ್ರಿಂಗ್ ಒಂದು ದಿನಕ್ಕೆ 4,32,000 ಸಲ ಹಿಗ್ಗಿ ಮತ್ತು ಕುಗ್ಗುತ್ತದೆ.
 ಬ್ಯಾಲೆನ್ಸ್ ಸ್ಪ್ರಿಂಗ್ ಮನುಷ್ಯನ ತಲೆಕೂದಲಿಗಿಂತ ತೆಳುವಾಗಿರುತ್ತದೆ.
 ಒಂದು ತೊಟ್ಟು ಆಯಿಲ್‍ನಿಂದ ಸುಮಾರು ಒಂದು ನೂರು ಗಡಿಯಾರಗಳಿಗೆ ಆಯಿಲ್ ಹಾಕಬಹುದು.
 ಗಡಿಯಾರದ ಮೈನ್ ಸ್ಪ್ರಿಂಗ್ ಉತ್ತಮವಾದ ಉಕ್ಕಿನಿಂದ ತಯಾರಿಸುತ್ತಾರೆ. ಇದರ ಉದ್ದ ಸುಮಾರು 200 ಮಿಮೀ ಇದರ ಅಗಲ ಸುಮಾರು 1.25 ಮಿಮೀ ದಪ್ಪ 0.11 ಮಿಮೀ.
 ಪ್ರಪಂಚದ ಅತಿ ಸಣ್ಣ ವಾಚ್ ಎಂದರೆ ಅದರ ಉದ್ದ 1.2 ಸೆಂ.ಮೀ, ಅಗಲ 0.476 ಸೆಂ.ಮೀ ಅದರ ಭಾರ 7 ಗ್ರಾಂ.
 ಈಗ ಸೆಕೆಂಡ್ ಅಂದರೆ ಒಂದು ಸೌರ ದಿವಸದ 86,400 ಭಾಗವಲ್ಲ. ಈಗ ಪರಮಾಣು ಕಂಪಿಸುವ 9,19,26,31,770 ಸಂಖ್ಯೆಯೇ ಒಂದು ಸೆಕೆಂಡ್.
 
ಹೈಟೆಕ್ ಗಡಿಯಾರಗಳು

ಕಾಲ ಹೇಳುವ ಗಡಿಯಾರಗಳು ಕೇವಲ ಸಾಮಾನ್ಯ ಉಪಕರಣಗಳಲ್ಲ. ಈಗ ಅವು ಕಂಪ್ಯೂಟರ್ ಪರದೆಯ ಮೇಲೆ ಅಪೂರ್ವ ಮಾಹಿತಿಯನ್ನು ಮೂಡಿಸಬಲ್ಲವು. ಇಂಥ ಹೈಟೆಕ್ ವಾಚುಗಳ ವೈಶಿಷ್ಟ್ಯ ಏನೆಂದರೆ `ಡಾಟಾಲಿಂಕ್ ಬಳಸಿ ವಿವಿಧ ಭೇಟಿ ಹಾಗೂ ಸಂದರ್ಶನಗಳ ವೇಳೆಗಳನ್ನು ಅಲರಂ ಜತೆಗೆ ದಾಸ್ತಾನು ಮಾಡಿಡಬಹುದು.

ಅತ್ಯಂತ ತುರ್ತು ವೇಳೆಯಲ್ಲಿ ಬೇಕಾದ ದೂರವಾಣಿ ಸಂಖ್ಯೆ, ವಿಳಾಸ ಮತ್ತು ಜ್ಞಾಪಕ ಸಂದೇಶಗಳನ್ನು ಡಾಟಾಲಿಂಕ್‍ನಲ್ಲಿ ಇಟ್ಟುಕೊಳ್ಳಬಹುದು. ಕಡಿಮೆ ಬೆಳಕಿನಲ್ಲಿ ರಾತ್ರಿ ವೇಳೆ ಡಾಟಾಲಿಂಕ್ ವಾಚ್ ಬಳಸಲು ಅನುಕೂಲವಾಗುವಂತೆ `ಇಂಡಿಗೋ ಎಂದು ಕರೆಯುವ ಒಂದು ದೀಪ ಕೂಡಾ ಗಡಿಯಾರದಲ್ಲಿರುತ್ತದೆ.

ಡಾಟಾಲಿಂಕ್ ಗಡಿಯಾರದ ಭವಿಷ್ಯದ ಮಾದರಿಗಳು ಅತ್ಯಂತ ಇತ್ತೀಚಿನ ವಾರ್ತೆಗಳ ಮುಖ್ಯಾಂಶಗಳು. ಕ್ರೀಡಾ ಫಲಿತಾಂಶಗಳು, ಹಣಕಾಸಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಕೂಡ ಬರಮಾಡಿಕೊಳ್ಳಲು ಸಮರ್ಥವಾಗಿರುತ್ತದೆ.

ಈ ಸಂದೇಶ ಗಡಿಯಾರದಲ್ಲಿ ಒಂದು ಎಫ್ ಎಂ ರೇಡಿಯೋ ಕೂಡ ಇದೆ. ಈ ಗಡಿಯಾರ ಬಳಸುವವರು, ಹವಾಮಾನದ ವರದಿ, ಹಣಕಾಸು ಮಾಹಿತಿ ಮತ್ತು ಕ್ರೀಡಾ ಫಲಿತಾಂಶಗಳನ್ನು ಈ ಗಡಿಯಾರದ ಮುಖದಲ್ಲಿ ಮೂಡಿ ಬರುವ ಪರದೆಯ ಮೇಲೆ ಕಾಣಬಹುದು.

ಎಂಬತ್ತು ಡಾಲರ್ ಬೆಲೆಯ ಈ ಗಡಿಯಾರದ ಬ್ಯಾಟರಿ ಹದಿನೆಂಟು ತಿಂಗಳುಗಳ ಕಾಲ ಬಾಳಿಕೆ ಬರುತ್ತದೆ.

ಇಂತಹ ಹೈಟೆಕ್ ಗಡಿಯಾರಗಳು ಭಾರತಕ್ಕೂ ಬರಲಿದೆ. ಇವುಗಳ ಆಗಮನದೊಂದಿಗೆ ಭಾರತದ ಗಡಿಯಾರ ಸಂಸ್ಥೆಗಳು ತಮ್ಮ ಉಳಿವಿಗಾಗಿ ಹೈಟೆಕ್ ಗಡಿಯಾರಗಳ ಉತ್ಪಾದನೆಗೆ ತೊಡಗಬೇಕಾಗುತ್ತದೆ.
ಗಡಿಯಾರದಲ್ಲಿ ವಿಶ್ವದರ್ಶನವಾಗುವ ದಿನ ಇನ್ನೇನು ಹತ್ತಿರದಲ್ಲೇ ಇದೆ.

ಕ್ವಾಟ್ರ್ಸ್ ಗಡಿಯಾರಗಳು

ಇವು ಕಾಲ ನಿರ್ಧರಿಸುವ ಅಂಗಭಾಗವಾಗಿ ಸ್ಪಂದಿಸುವ ಕ್ವಾಟ್ರ್ಸ್ ಹರಳನ್ನು ಹೊಂದಿರುತ್ತದೆ. ವಿದ್ಯುತ್ ಬಳಕೆಯ ಮೂಲಕ ಇವನ್ನು ಸ್ಪಂದಿಸುವಂತೆ ಮಾಡಲಾಗುತ್ತದೆ.

ಕ್ವಾಟ್ರ್ಸ್ ಕೈಗಡಿಯಾರಗಳು

ಇವು ಗಡಿಯಾರಗಳಲ್ಲಿ ಅತ್ಯಂತ ಆಧುನಿಕ ಅನ್ವೇಷಣಾ ಕೊಡುಗೆ ಎನ್ನಬಹುದು. ಪ್ರಕೃತಿಯಲ್ಲಿ ದೊರಕುವ ಹೇರಳವಾದ ಬೆಣಚುಕಲ್ಲು ಇದಕ್ಕೆ ಮೂಲ ವಸ್ತು. ಈ ಬೆಣಚುಕಲ್ಲಿನ ಕೋಶವು ವಿದ್ಯುತ್ ಶಕ್ತಿಯನ್ನುಂಟುಮಾಡಿ ಗಡಿಯಾರಗಳನ್ನು ನಡೆಸುತ್ತದೆ. ಇದರ ಆಂದೋಲನ ವೇಗ ಸುಮಾರು ಒಂದು ಸೆಕೆಂಡಿಗೆ 32,768 ಊ ಇರುತ್ತದೆ.

ಈ ಗಡಿಯಾರಗಳು ಈಗ ಪ್ರಪಂಚದ ಎಲ್ಲೆಡೆಗಳಲ್ಲೂ ತೀವ್ರ ಬಳಕೆಯಲ್ಲಿದೆ. ಆದ್ದರಿಂದ ಈ ಕ್ವಾಟ್ರ್ಸ್ ಕೈಗಡಿಯಾರಗಳ ವಿವಿಧ ಭಾಗಗಳ ಮತ್ತು ಅವುಗಳ ಕಾರ್ಯನಿರ್ವಹಣೆ ಮತ್ತು ಅನುಕೂಲಗಳ ಸಂಕ್ಷಿಪ್ತ ಪರಿಚಯ ಅತ್ಯಗತ್ಯ. ಅದನ್ನು ಈ ರೀತಿ ವಿವರಿಸಬಹುದು.

ಕ್ರಮ ಸಂಖ್ಯೆ 		ಭಾಗದ ಹೆಸರು				ಕಾರ್ಯ ನಿರ್ವಹಣೆ

 * 1.			ಸೆಲ್					ಚಲನ ಶಕ್ತಿಯನ್ನು ಕೊಡುತ್ತದೆ.
 *  2.			ಅನುಕಲಿತ ಮಂಡಲ			ಇದು 32,768 ಊ ನಂತೆ ಉತ್ಪಾದಿಸಿ           
 * 								ಹಂತಿತ (ಹಂತಗಳ) ಮೋಟಾರನ್ನು 
 * 								ತಿರುಗಿಸುತ್ತದೆ.
 *  3.			ಕ್ವಾಟ್ರ್ಸ್					ಇದು ಒಂದು ಸೆಕೆಂಡಿನಲ್ಲಿ 32,768
 * 								ಅಲೆಗಳನ್ನು ಉತ್ಪಾದಿಸುತ್ತದೆ.
 *  4.			ಟ್ರಿಮ್ಮರ್					ಇದು ತರಂಗಗಳ ಅಂತರವನ್ನು ಹಿಡಿತ
 * 								ದಲ್ಲಿಟ್ಟುಕೊಳ್ಳುತ್ತದೆ. (ನಿಯಂತ್ರಿಸುತ್ತದೆ)
 *  5.			ಟ್ರೈನ್ ವೀಲ್ಸ್				ಮುಳ್ಳಿನ ಚಲನೆಗೆ ಸಹಕರಿಸುತ್ತದೆ.
 *  6.			ಅನಾಗಲ್ ಡಿಸ್‍ಪ್ಲೇ			       ಇದು ಗಡಿಯಾರದ ಮುಖ್ಯಫಲಕ.
 * 								ಮುಳ್ಳುಗಳು ಕಾಲವನ್ನು ಸೂಚಿಸುತ್ತದೆ. 
 * 								ಕಿಟಕಿಯ ತೆರೆಯಲ್ಲಿ ತಾರೀಖು, ದಿವಸ
 * 								ಗಳನ್ನು ನೋಡಬಹುದು.

(ಎಂ.ಎಸ್.ಚಂದ್ರಶೇಖರ ಅಯ್ಯರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ